ಬಸವಣ್ಣ   
  ವಚನ - 1377     
 
ಸಬಳದ ತುದಿಯಲ್ಲಿ ಕಟ್ಟಿದ ಗಂಟೆಯಂತೆ, ಮಾತು ಲಿಂಗಾ ಲಿಂಗಾ ಎನುತ್ತ ಮೊನೆ ಇರಿವಂತೆ ಬೇಡವಯ್ಯಾ, ಹುಸಿ. ಮಾತಿನಲ್ಲಿ ದಿಟ, ಮನದಲ್ಲಿ ಸಟೆ ಬೇಡವಯ್ಯಾ. ಮನ ವಚನ ಕಾಯ ಒಂದಾಗದಿದ್ದರೆ ಕೂಡಲಸಂಗಯ್ಯನೆಂತೊಲಿವನಯ್ಯಾ?