ಬಸವಣ್ಣ   
  ವಚನ - 1386     
 
ಸುಖವಾದಡುಂಡು, ದುಃಖ ಬಂದಲ್ಲಿ ಬಳಲಿದಡಹುದೆ? ತಯ್ಯಲೆಂದಡುಂಡು, ಹುಯ್ಯಲೆಂದ(ಡೋಡಿದೊ)ಡಹುದೆ? ಕೇಳಯ್ಯಾ ಕೂಡಲಸಂಗಮದೇವಯ್ಯಾ ನೀ ಮಾಡಿದ ಮಾಟಕ್ಕಾಡಿದಡಹುದೆ?