ಬಸವಣ್ಣ   
  ವಚನ - 1399     
 
ಹಳಿವವರ ಲೆಂಕ, ಮತ್ಸರಿಸುವವರ ಡಿಂಗರಿಗ, ಸಲೆಯಾಳಿಗೊಂಬವರ ತೊತ್ತಿನ ಮಗ. ಜರಿದು (ಮತ್ಸರಿ)ಸಿ, ಹೊಯ್ದು ಬೈದು ಅದ್ದಲಿಸಿ ಬುದ್ಧಿಯ ಹೇಳುವ ಹಿರಿಯರಾದ ಡೋಹರ ಕಕ್ಕಯ್ಯಗಳ ಪಾದರಕ್ಷೆಯ ಕಿರುಕುಣಿಕೆಯಲ್ಲಿ ಎ(ನ್ನನ್ನಿ)ಡು ಕೂಡಲಸಂಗಮದೇವಾ.