•  
  •  
  •  
  •  
Index   ವಚನ - 85    Search  
 
ಬಾಗಿ ಗುರುಚರಣವನು ಬೇಗದಿಂದಲಿ ಭಜಿಸಿ | ಆಗಮಾತೀತನೊಳು ಭವವದಾಟಿದನು | ಭೋಗದೊಳಿಹನೆ ? ಸರ್ವಜ್ಞ
Transliteration Bāgi gurucaraṇavanu bēgadindali bhajisi | āgamātītanoḷu bhavavadāṭidanu | bhōgadoḷihane? Sarvajña
ಶಬ್ದಾರ್ಥಗಳು ಆಗಮಾತೀತ = ಆಗಮ ಶಾಸ್ತ್ರಗಳಿಗೆ ಮೀರಿದವ; ಪರಶಿವ; ಬಾಗಿ = ಸಾಷ್ಟಾಂಗ ನಮಸ್ಕಾರ ಮಾಡಿ; ಭವ = ಸಂಸಾರಸಾಗರ ಭೋಗದೊಳಿಹನೆ=ಫಲಪ್ರಾಪ್ತಿಯನ್ನು ಹೊಂದುವವನೆ?; ವೇಗದಿಂದ = ವಯಸ್ಸನ್ನೂ ಸಂಸಾರ ಸುಖಗಳನ್ನೂ ಗಣಿಸದೆ ;