•  
  •  
  •  
  •  
Index   ವಚನ - 305    Search  
 
ಇಂದ್ರಿಯವ ತೊರೆದಾತ ವಂದ್ಯನಹ ಜಗಕೆಲ್ಲ | ಬಿಂದುವಿನ ಭೇದವರಿದ ಮಹಾತ್ಮನು | ಬೆಂದನುಲಿಯಂತೆ! ಸರ್ವಜ್ಞ
Transliteration Indriyava toredāta vandyanaha jagakella | binduvina bhēdavarida mahātmanu | bendanuliyante! Sarvajña
ಶಬ್ದಾರ್ಥಗಳು ಇಂದ್ರಿಯ = ವಿಷಯ ಸುಖ; ಬಿಂದುವಿನ ಭೇದವರಿದ = 1) ಬಿಂದು, ನಾದ ಕಳಾತೀತನಾದ ಪರಶಿವನನ್ನು ತಿಳಿದ 2) ಶರೀರದ ಅಸ್ಥಿರತ್ವವನ್ನು ಅರಿತ; ಬೆಂದನುಲಿ = ಜ್ಞಾನಾಗ್ನಿಯಿಂದ ಸಂಸಾರ ಬಂಧನವನ್ನು ಸುಟ್ಟ, ವಾಸನಾರಹಿತ; ವಂದ್ಯ = ಪೂಜನೀಯ;