ಮನ ಕತ್ತಲೆ, ತನು ಹಮ್ಮು, ನೆನಹು ಮರೆವೆ,
ಇವರೊಳಗೆ ಇದ್ದು ಘನವ ಕಂಡೆಹೆನೆಂಬ ಅಣ್ಣಗಳಿರಾ,
ನೀವು ಕೇಳಿರೊ.
ಘನವ ಕಾಂಬುದಕ್ಕೆ ಮನವೆಂತಾಗಬೇಕೆಂದಡೆ,
ಅಕ್ಕಿಯ ಥಳಿಸಿದಂತೆ, ಹಲ್ಲ ಸುಲಿದಂತೆ,
ಕನ್ನಡಿಯ ನೋಡಿದಂತೆ,
ಮನ ನಿರ್ಮಲವಾದಲ್ಲದೆ ಘನವ ಕಾಣಬಾರದು
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.
Transliteration Mana kattale, tanu ham'mu, nenahu mareve,
ivaroḷage iddu ghanava kaṇḍ'̔ehenemba aṇṇagaḷirā,
nīvu kēḷiro.
Ghanava kāmbudakke manaventāgabēkendaḍe,
akkiya thaḷisidante, halla sulidante,
kannaḍiya nōḍidante,
mana nirmalavādallade ghanava kāṇabāradu
nam'ma appaṇṇapriya cennabasavaṇṇa.