ತನು ನಷ್ಟವಾದಡೇನಯ್ಯಾ, ಮನನಷ್ಟವಾಗದನ್ನಕ್ಕ?
ವಾಕ್ಕು ನಷ್ಟವಾದಡೇನಯ್ಯಾ, ಬೇಕುಬೇಡೆಂಬುದಳಿಯದನ್ನಕ್ಕ?
ಅಂಗಸುಖ ನಷ್ಟವಾದಡೇನಯ್ಯಾ, ಕಂಗಳ ಪಟಲ ಹರಿಯದನ್ನಕ್ಕ?
ಮನ ಮುಗ್ಧವಾದಡೇನಯ್ಯಾ, ಅಹಂ ಎಂಬುದ ಬಿಡದನ್ನಕ್ಕ?
ಇವೆಲ್ಲರೊಳಗಿದ್ದು ವಲ್ಲಭನೆನಿಸಿಕೊಂಬವರ ನುಡಿಯ ಬಲ್ಲರು
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.
Transliteration Tanu naṣṭavādaḍēnayyā, mananaṣṭavāgadannakka?
Vākku naṣṭavādaḍēnayyā, bēkubēḍembudaḷiyadannakka?
Aṅgasukha naṣṭavādaḍēnayyā, kaṅgaḷa paṭala hariyadannakka?
Mana mugdhavādaḍēnayyā, ahaṁ embuda biḍadannakka?
Ivellaroḷagiddu vallabhanenisikombavara nuḍiya ballaru
nam'ma appaṇṇapriya cennabasavaṇṇa.