ನಿಶ್ಚಿಂತವಾದವಂಗೆ ಮತ್ತಾರ ಹಂಗುಂಟೆ?
ಚಿತ್ತಸುಯಿದಾನವಾದವಂಗೆ
ತತ್ವವ ಕಂಡೆಹೆನೆಂಬುದುಂಟೆ?
ತಾನುತಾನಾದವಂಗೆ ಮಾನವರ ಹಂಗುಂಟೆ?
ಭಾವಬಯಲಾದವಂಗೆ ಬಯಕೆಯೆಂಬುದುಂಟೆ?
ಗೊತ್ತ ಕಂಡವಂಗೆ ಅತ್ತಿತ್ತಲರಸಲುಂಟೆ?
ಇಂತು ನಿಶ್ಚಯವಾಗಿ ನಿಜವ ನೆಮ್ಮಿದ ಶರಣರ
ಎನಗೊಮ್ಮೆ ತೋರಿಸಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
Transliteration Niścintavādavaṅge mattāra haṅguṇṭe?
Cittasuyidānavādavaṅge
tatvava kaṇḍ'̔ehenembuduṇṭe?
Tānutānādavaṅge mānavara haṅguṇṭe?
Bhāvabayalādavaṅge bayakeyembuduṇṭe?
Gotta kaṇḍavaṅge attittalarasaluṇṭe?
Intu niścayavāgi nijava nem'mida śaraṇara
enagom'me tōrisayyā, appaṇṇapriya cennabasavaṇṇā.