ಕಂಡಿಹೆ ಕೇಳಿಹೆನೆಂಬ ದ್ವಂದ್ವವ ಹಿಂಗಿ,
ಉಂಡಿಹೆ ಉಟ್ಟಿಹೆನೆಂಬ ಹಂಗ ಬಿಟ್ಟು,
ನಡೆದಿಹೆ ನುಡಿದಿಹೆನೆಂಬ ಮಾಟವ ನಿಲಿಸಿ,
ಜಗದಾಟವ ನಿಲಿಸಿ,
ಮಾಟಕೂಟ ಜಪಕೋಟಲೆಯೊಳು ಸಿಕ್ಕದೆ
ದಾಟಿ ಹೋದ ಶರಣರ ಪಾದಕ್ಕೆ
ಶರಣೆಂದು ಬದುಕಿದೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
Transliteration Kaṇḍ'̔ihe kēḷihenemba dvandvava hiṅgi,
uṇḍ'̔ihe uṭṭihenemba haṅga biṭṭu,
naḍedihe nuḍidihenemba māṭava nilisi,
jagadāṭava nilisi,
māṭakūṭa japakōṭaleyoḷu sikkade
dāṭi hōda śaraṇara pādakke
śaraṇendu badukidenayyā
appaṇṇapriya cennabasavaṇṇā.