•  
  •  
  •  
  •  
Index   ವಚನ - 59    Search  
 
ಮರ್ತ್ಯದ ಮನುಜರು ಸತ್ತರೆಲ್ಲ. ಕತ್ತಲೆಯೊಳು ಮುಳುಗಿ, ಮಾತು ಕಲಿತುಕೊಂಡು, ತೂತುಬಾಯೊಳಗೆ ನುಡಿದು, ಕಾತರಿಸಿ ಕಂಗೆಟ್ಟು, ಹೇಸಿಕೆಯ ಮಲದ ಕೊಣದ ಉಚ್ಚೆಯ ಬಾವಿಗೆ ಮೆಚ್ಚಿ, ಕಚ್ಚಿಯಾಡಿ ಹುಚ್ಚುಗೊಂಡು ತಿರುಗುವ ಕತ್ತೆಮನುಜರ ಮೆಚ್ಚರು ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.
Transliteration Martyada manujaru sattarella. Kattaleyoḷu muḷugi, mātu kalitukoṇḍu, tūtubāyoḷage nuḍidu, kātarisi kaṅgeṭṭu, hēsikeya malada koṇada ucceya bāvige mecci, kacciyāḍi huccugoṇḍu tiruguva kattemanujara meccaru nam'ma appaṇṇapriya cennabasavaṇṇa.