•  
  •  
  •  
  •  
Index   ವಚನ - 61    Search  
 
ಹುಟ್ಟಿದ ಮನುಜರೆಲ್ಲಾ ಬಂದ ಬಟ್ಟೆಯ ನೋಡಿ ಭ್ರಮೆಗೊಂಡು ಬಳಲುತ್ತೈದಾರೆ. ಇದನರಿದು ಬಂದ ಬಟ್ಟೆಯ ಮೆಚ್ಚಿ, ಕಾಣದ ಹಾದಿಯ ಕಂಡು, ಹೋಗದ ಹಾದಿಯ ಹೋಗುತ್ತಿರಲು, ಕಾಲ ಕಾಮಾದಿಗಳು ಬಂದು ಮುಂದೆ ನಿಂದರು. ಅಷ್ಟಮದಂಗಳು ಬಂದು ಅಡ್ಡಗಟ್ಟಿದವು. ದಶವಾಯು ಬಂದು ಮುಸುಕುತ್ತಿವೆ. ಸಪ್ತವ್ಯಸನ ಬಂದು ಒತ್ತರಿಸುತಿವೆ. ಷಡುವರ್ಗ ಬಂದು ಸಮರಸವ ಮಾಡುತ್ತಿವೆ. ಕರಣಂಗಳು ಬೆಂದು ಉರಿವುತ್ತಿವೆ. ಮರೆವೆ ಎಂಬ ಮಾಯೆ ಬಂದು ಕಾಡುತೀವಳೆ. ತೋರುವ ತೋರಿಕೆಯೆಲ್ಲವೂ ಸುತ್ತ ಮೊತ್ತವಾಗಿವೆ. ಇವ ಕಂಡು ಅಂಜಿ ಅಳುಕಿ ಅಂಜನದಿಂದ ನೋಡುತ್ತಿರಲು ತನ್ನಿಂದ ತಾನಾದೆನೆಂಬ ಬಿನ್ನಾಣವ ತಿಳಿದು, ಮುನ್ನೇತರಿಂದಲಾಯಿತು, ಆಗದಂತೆ ಆಯಿತೆಂಬ ಆದಿಯನರಿದು, ಹಾದಿಯ ಹತ್ತಿ ಹೋಗಿ ಕಾಲ ಕಾಮಾದಿಗಳ ಕಡಿದು ಖಂಡಿಸಿ, ಅಷ್ಟಮದಂಗಳ ಹಿಟ್ಟುಗುಟ್ಟಿ, ದಶವಾಯುಗಳ ಹೆಸರುಗೆಡಿಸಿ, ಸಪ್ತವ್ಯಸನವ ತೊತ್ತಳದುಳಿದು, ಷಡ್ವರ್ಗವ ಸಂಹರಿಸಿ,ಕರಣಂಗಳ ಸುಟ್ಟುರುಹಿ, ಮರವೆಯೆಂಬ ಮಾಯೆಯ ಮರ್ಧಿಸಿ, ನಿರ್ಧರವಾಗಿ ನಿಂದು ಸುತ್ತ ಮೊತ್ತವಾಗಿರುವವನೆಲ್ಲ ಕಿತ್ತು ಕೆದರಿ,ಮನ ಬತ್ತಲೆಯಾಗಿ, ಭಾವವಳಿದು ನಿರ್ಭಾವದಲ್ಲಿ ಆಡುವ ಶರಣ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ.
Transliteration Huṭṭida manujarellā banda baṭṭeya nōḍi bhramegoṇḍu baḷaluttaidāre. Idanaridu banda baṭṭeya mecci, kāṇada hādiya kaṇḍu, hōgada hādiya hōguttiralu, kāla kāmādigaḷu bandu munde nindaru. Aṣṭamadaṅgaḷu bandu aḍḍagaṭṭidavu. Daśavāyu bandu musukuttive. Saptavyasana bandu ottarisutive. Ṣaḍuvarga bandu samarasava māḍuttive. Karaṇaṅgaḷu bendu urivuttive. Mareve emba māye bandu kāḍutīvaḷe. Tōruva tōrikeyellavū sutta mottavāgive. Iva kaṇḍu an̄ji aḷuki an̄janadinda nōḍuttiralu tanninda tānādenemba binnāṇava tiḷidu, munnētarindalāyitu, āgadante āyitemba ādiyanaridu, hādiya hatti hōgi kāla kāmādigaḷa kaḍidu khaṇḍisi, aṣṭamadaṅgaḷa hiṭṭuguṭṭi, Daśavāyugaḷa hesarugeḍisi, saptavyasanava tottaḷaduḷidu, ṣaḍvargava sanharisi,karaṇaṅgaḷa suṭṭuruhi, maraveyemba māyeya mardhisi, nirdharavāgi nindu sutta mottavāgiruvavanella kittu kedari,mana battaleyāgi, bhāvavaḷidu nirbhāvadalli āḍuva śaraṇa, appaṇṇapriya cennabasavaṇṇa tāne nōḍā.