•  
  •  
  •  
  •  
Index   ವಚನ - 79    Search  
 
ನಾನೊಂದು ಹಾಳೂರಿಗೆ ಹೋಗುತ್ತಿರಲು, ಆ ಹಾಳೂರ ಹೊಕ್ಕಡೆ, ಅಲ್ಲಿ ನಾಯಿಗಳು ಅಟ್ಟಿಕೊಂಡು ಬಂದವು, ಹುಲಿ ಕರಡಿ ಅಡ್ಡಲಾದವು.ಇವ ಕಂಡು ನಾ ಹೆದರಿಕೊಂಡು ನನ್ನ ಕೈಗೊಂದು ಕಲ್ಲ ತೆಕ್ಕೊಂಡು ನೋಡುತ್ತ ಬರುತ್ತಿರಲು, ಆ ನಾಯಿಗಳು ಓಡಿ ಹೋದವು. ಹುಲಿ ಕರಡಿಗಳು ಅಲ್ಲಿಯೇ ಬಯಲಾದವು. ಆ ಊರು ನಿರ್ಮಲವಾಯಿತ್ತು. ಆ ನಿರ್ಮಲವಾದ ಊರ ಹೊಕ್ಕು ನೋಡಲು, ಆ ನೋಡುವ ನೋಟವು, ಆ ಊರನಾಳುವ ಅರಸು, ಆ ಊರು ಕೂಡಿ ಒಂದಾದವು. ಆ ಒಂದಾದುದನೆ ನೋಡಿ, ದ್ವಂದ್ವವನೆ ಹರಿದು, ನಿಮ್ಮ ಸಂಗಸುಖದೊಳಗೋಲಾಡಿ ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
Transliteration Nānondu hāḷūrige hōguttiralu, ā hāḷūra hokkaḍe, alli nāyigaḷu aṭṭikoṇḍu bandavu, huli karaḍi aḍḍalādavu.Iva kaṇḍu nā hedarikoṇḍu nanna kaigondu kalla tekkoṇḍu nōḍutta baruttiralu, ā nāyigaḷu ōḍi hōdavu. Huli karaḍigaḷu alliyē bayalādavu. Ā ūru nirmalavāyittu. Ā nirmalavāda ūra hokku nōḍalu, ā nōḍuva nōṭavu, ā ūranāḷuva arasu, ā ūru kūḍi ondādavu. Ā ondādudane nōḍi, dvandvavane haridu, nim'ma saṅgasukhadoḷagōlāḍi sukhiyādenayyā appaṇṇapriya cennabasavaṇṇā.