•  
  •  
  •  
  •  
Index   ವಚನ - 83    Search  
 
ಅಯ್ಯಾ, ನಿಮ್ಮ ಚರಣವಿಡಿದು ಮನವ ನಿಲಿಸಿದೆ, ತನುವ ಮರೆದೆ; ಮಹಾಘನವ ಕಂಡೆ; ಲಿಂಗದ ನೆಲೆವಿಡಿದೆ. ಅಂಗವ ಲಿಂಗವೆಂದು ನೋಡಲು ಕಂಗಳ ಮುಂದಣ ಬೆಳಗೇ ಲಿಂಗವಾಗಿ, ಆ ಕಂಗಳ ಮುಂದಣ ಬೆಳಗ ನೋಡಿಹೆನೆಂದು ಸಂಗ ಸುಖವ ಮರೆದು, ಆ ಮಂಗಳದ ಮಹಾಬೆಳಗಿನಲ್ಲಿ ನಿಜಮುಕ್ತಳಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
Transliteration Ayyā, nim'ma caraṇaviḍidu manava niliside, tanuva marede; mahāghanava kaṇḍe; liṅgada neleviḍide. Aṅgava liṅgavendu nōḍalu kaṅgaḷa mundaṇa beḷagē liṅgavāgi, ā kaṅgaḷa mundaṇa beḷaga nōḍ'̔ihenendu saṅga sukhava maredu, ā maṅgaḷada mahābeḷaginalli nijamuktaḷādenayyā appaṇṇapriya cennabasavaṇṇā.