ನರರ ಬೇಡೆನು, ಸುರರ ಹಾಡೆನು,
ಕರಣಂಗಳ ಹರಿಯಬಿಡೆನು,
ಕಾಮನ ಬಲೆಗೆ ಸಿಲ್ಕೆನು, ಮರೆವೆಗೊಳಗಾಗೆನು.
ಪ್ರಣವ ಪಂಚಾಕ್ಷರಿಯ ಜಪಿಸಿಹೆನೆಂದು
ತನುವ ಮರೆದು ನಿಜಮುಕ್ತಳಾದೆನಯ್ಯಾ,
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
Transliteration Narara bēḍenu, surara hāḍenu,
karaṇaṅgaḷa hariyabiḍenu,
kāmana balege silkenu, marevegoḷagāgenu.
Praṇava pan̄cākṣariya japisihenendu
tanuva maredu nijamuktaḷādenayyā,
appaṇṇapriya cennabasavaṇṇā.