•  
  •  
  •  
  •  
Index   ವಚನ - 95    Search  
 
ಘಟವೆಂಬ ಮಠದೊಳಗೆ ಮನವೆಂಬ ಮರ ಹುಟ್ಟಿತ್ತು. ಬೇರುವರಿಯಿತ್ತು, ಅದಕ್ಕೆ ಶತಕೋಟಿ ಶಾಖೆ ಬಿಟ್ಟಿತ್ತು. ಆ ಶಾಖೆಯ ಬೆಂಬಳಿಗೊಂಡು ಆಡುವರೆಲ್ಲ ಮುಂದುಗಾಣದೆ ಸಂದುಹೋದರು. ಇದನರಿದು ನಿಮ್ಮ ಶರಣರು ಹಿಂದೆ ನೋಡಿ ಮುಂದೆ ಲಿಂಗದಲ್ಲಿ ಬೆರೆವ ಭೇದವ ಕಂಡು, ಮನವೆಂಬ ಮರದ ಬೇರನಗಿದು ಶತಕೋಟಿ ಶಾಖೆಯನು ಸವರಿ, ತುತ್ತತುದಿಯ ಮೇಲೆ ನಿಂದು ನೋಡುವನ್ನಕ್ಕ, ನಾನೆತ್ತ ಹೋದೆನೆಂದರಿಯೆನಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
Transliteration Ghaṭavemba maṭhadoḷage manavemba mara huṭṭittu. Bēruvariyittu, adakke śatakōṭi śākhe biṭṭittu. Ā śākheya bembaḷigoṇḍu āḍuvarella mundugāṇade sanduhōdaru. Idanaridu nim'ma śaraṇaru hinde nōḍi munde liṅgadalli bereva bhēdava kaṇḍu, manavemba marada bēranagidu śatakōṭi śākheyanu savari, tuttatudiya mēle nindu nōḍuvannakka, nānetta hōdenendariyenayyā, appaṇṇapriya cennabasavaṇṇā.