•  
  •  
  •  
  •  
Index   ವಚನ - 100    Search  
 
ದಾರಿವಿಡಿದು ಬರಲು ಮುಂದೆ ಸರೋವರವ ಕಂಡೆ. ಆ ಸರೋವರದ ಮೇಲೆ ಮಹಾಘನವ ಕಂಡೆ. ಆ ಮಹಾಘನವಿಡಿದು ಮನವ ನಿಲಿಸಿ ಕಾಯಗುಣವನುಳಿದು ಕರಣಗುಣವ ಸುಟ್ಟು, ಆಸೆಯನೆ ಅಳಿದು, ರೋಷವನೆ ನಿಲಿಸಿ, ಜಗದೀಶ್ವರನಾದ ಶರಣರ ಮರ್ತ್ಯದ ಹೇಸಿಗಳೆತ್ತಬಲ್ಲರು ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ
Transliteration Dāriviḍidu baralu munde sarōvarava kaṇḍe. Ā sarōvarada mēle mahāghanava kaṇḍe. Ā mahāghanaviḍidu manava nilisi kāyaguṇavanuḷidu karaṇaguṇava suṭṭu, āseyane aḷidu, rōṣavane nilisi, jagadīśvaranāda śaraṇara martyada hēsigaḷettaballaru appaṇṇapriya cennabasavaṇṇā