•  
  •  
  •  
  •  
Index   ವಚನ - 207    Search  
 
ಬಸವಯ್ಯಾ ಬಸವಯ್ಯಾ ಹುಯ್ಯಲಿಲ್ಲದ ಹುಲ್ಲೆಯಾದೆಯಾ? ಬಸವಯ್ಯಾ ಬಸವಯ್ಯಾ ಕಾಯವಿಲ್ಲದ ದೇಹಿಯಾದೆಯಾ? ಬಸವಯ್ಯಾ ಬಸವಯ್ಯಾ ಕರ್ಮವಿರಹಿತನಾದೆಯಾ? ಸಂಗಯ್ಯನಲ್ಲಿ ನಿರ್ಮಳಮೂರ್ತಿ ಬಸವಯ್ಯಾ.
Transliteration Basavayyā basavayyā huyyalillada hulleyādeyā? Basavayyā basavayyā kāyavillada dēhiyādeyā? Basavayyā basavayyā karmavirahitanādeyā? Saṅgayyanalli nirmaḷamūrti basavayyā.