ಮಡದಿ ಎಂಬ ಶಬ್ದ ನಿಶ್ಶಬ್ದವಾದಡೆ,
ನಾನೀಗ ನಿಜಸುಖಿ ಬಸವಾ.
ಬಸವನಂಗವ ಕಂಡಡೆ ನಾನು ಪರಿಣಾಮಿ,
ಬಸವನ ಹರುಷವ ಕಂಡರಿದಡೆ
ನಾನೈಕ್ಯಸಂಪನ್ನೆಯಯ್ಯಾ ಸಂಗಯ್ಯಾ.
Transliteration Maḍadi emba śabda niśśabdavādaḍe,
nānīga nijasukhi basavā.
Basavanaṅgava kaṇḍaḍe nānu pariṇāmi,
basavana haruṣava kaṇḍaridaḍe
nānaikyasampanneyayyā saṅgayyā.