ಮೌಕ್ತಿಕದ ಮಂಟಪ ಕಟ್ಟಿ.
ಮನೆಯೊಳಗೆ ತೋರಣಗಟ್ಟಿದವು.
ಮಾಣಿಕ್ಯದ ವರ್ಣದ ತೋರಣವು.
ಆ ಮಾಣಿಕ್ಯದ ವರ್ಣದ ತೋರಣವ ಕಂಡು,
ಆ ತೋರಣವ ಸರಗೊಳಿಸಿ
ಸರದ ಮುಂದೆ ಮಧ್ಯಸ್ವರೂಪವಾಗಿ
ಆನು ನಿಜ ಪರಿಣಾಮಿಯಾದೆನಯ್ಯ ಸಂಗಯ್ಯ.
Transliteration Mauktikada maṇṭapa kaṭṭi.
Maneyoḷage tōraṇagaṭṭidavu.
Māṇikyada varṇada tōraṇavu.
Ā māṇikyada varṇada tōraṇava kaṇḍu,
ā tōraṇava saragoḷisi
sarada munde madhyasvarūpavāgi
ānu nija pariṇāmiyādenayya saṅgayya.