ಜಾಣಾನುಭಾವಿಯೆಂಬ ಪಿನಾಕಿಯ ಮಾತ ಕೇಳಿ ಬಂದೆ.
ಹಿರಿದು ಆರತದಿಂದ ಕಾಣಿಸುವನ್ನಕ್ಕರ
ತವಕ, ನುಡಿಗೆಡೆಗೊಡನೆಲಗೆ,
ಪ್ರಾಣಕ್ಕಾಧಾರ ಶಿವಶಿವಾ ಎಂಬ ಶಬುದ.
ಆತನ ಕಂಡಡೆ ಕಡೆಯದ ಕೀಲು ಕಳೆದಂತೆ
ಶಂಭುಜಕ್ಕೇಶ್ವರನ ಬೆರಸಲೊಡನೆ ಬೆರಗಾದೆನು.
Transliteration Jāṇānubhāviyemba pinākiya māta kēḷi bande.
Hiridu āratadinda kāṇisuvannakkara
tavaka, nuḍigeḍegoḍanelage,
prāṇakkādhāra śivaśivā emba śabuda.
Ātana kaṇḍaḍe kaḍeyada kīlu kaḷedante
śambhujakkēśvarana berasaloḍane beragādenu.