•  
  •  
  •  
  •  
Index   ವಚನ - 15    Search  
 
ದೇವರದೇವ ನೀನೆಂದೆನಿಸಿಕೊಂಡೆ ಬಾಣನ ಬಾಗಿಲ ಕಾಯ್ವರೇನಯ್ಯಾ ? ನಿತ್ಯತೃಪ್ತ ನೀನೆನಿಸಿಕೊಂಡೆ, ಚೆನ್ನನ ಮನೆಯಲುಂಬರೇನಯ್ಯಾ ? ಕರುಣಾಕರ ನೀನೆಂದೆನಿಸಿಕೊಂಡೆ, ಸಿರಿಯಾಳನ ಮಗನ ಬೇಡುವರೇನಯ್ಯಾ ? ನಿಮ್ಮ ಮಹಿಮೆಯ ನೀವೆ ಬಲ್ಲಿರಿ, ಎನ್ನನುದ್ಧರಿಸಯ್ಯಾ ಶಂಭುಜಕ್ಕೇಶ್ವರಾ.
Transliteration Dēvaradēva nīnendenisikoṇḍe bāṇana bāgila kāyvarēnayyā? Nityatr̥pta nīnenisikoṇḍe, cennana maneyalumbarēnayyā? Karuṇākara nīnendenisikoṇḍe, siriyāḷana magana bēḍuvarēnayyā? Nim'ma mahimeya nīve balliri, ennanuddharisayyā śambhujakkēśvarā.