ಭಾವನೇಕೆ ಬಾರನೆನ್ನ ಮನೆಗೆ ?
ಹರಿಯಮಗನನುರುಹಿದ ಗರುವದ
ಭಾವನೇಕೆ ಬಾರನೆನ್ನ ಮನೆಗೆ ?
ಅಸುರರ ಪುರವ ಸುಟ್ಟ ವೀರ
ಭಾವನೇಕೆ ಬಾರನೆನ್ನ ಮನೆಗೆ ?
ದಕ್ಷನ ಶಿರವನರಿದು, ಯಾಗವ
ಕೆಡಿಸಿ ಕುರಿದಲೆಯ ಹತ್ತಿಸಿ
ಬಿನ್ನಾಣದ ಬಲುಹ ಮೆರೆವ
ಏಕೋಭಾವನೇಕೆ ಬಾರನೆನ್ನ ಮನೆಗೆ ?
ಹರಿಯ ನಯನದ ಪೂಜೆ ಚರಣದಲೊಪ್ಪಿತ್ತೆಂಬ
ದುರುಳತನವು ತನಗೆ ಬೇಡವ್ವಾ.
ಪರವಧುವಿಂಗಳುಪಿ ಇಲ್ಲವೆಂಬ
ವಿಗಡತನದ ದುರುಳತನ ಬೇಡವ್ವಾ.
ಆತನ ಕರೆದು ತಾರವ್ವಾ, ಶಂಭುಜಕ್ಕೇಶ್ವರನ
ನೆರೆದು ನೋಡುವೆನು.
Transliteration Bhāvanēke bāranenna manege?
Hariyamagananuruhida garuvada
bhāvanēke bāranenna manege?
Asurara purava suṭṭa vīra
bhāvanēke bāranenna manege?
Dakṣana śiravanaridu, yāgava
keḍisi kuridaleya hattisi
binnāṇada baluha mereva
ēkōbhāvanēke bāranenna manege?
Hariya nayanada pūje caraṇadaloppittemba
duruḷatanavu tanage bēḍavvā.
Paravadhuviṅgaḷupi illavemba
vigaḍatanada duruḷatana bēḍavvā.
Ātana karedu tāravvā, śambhujakkēśvarana
neredu nōḍuvenu.