ಹಿರಿಯತನಕ್ಕೆ ಪಥವೆ,ಬಾಣನ ಮನೆಯ ಬಾಗಿಲ ಕಾಯ್ವುದು ?
ಮಹಂತತನಕ್ಕೆ ಪಥವೆ, ನಂಬಿಗೆ ಕುಂಟಣಿಯಾದುದು ?
ಕರುಣಿತನಕ್ಕೆ ಪಥವೆ,ಸಿರಿಯಾಳನ ಮಗನ ಕೊಲುವುದು ?
ದಾನಿತನಕ್ಕೆ ಪಥವೆ, ದಾಸನ ವಸ್ತ್ರವ ಸೀಳುವುದು ?
ನಿಮ್ಮ ಹಿರಿಯತನಕ್ಕಿದು ಪಥವೆ,ಬಲ್ಲಾಳನ ವಧುವ ಬೇಡುವುದು ?
ನಿಮ್ಮ ಗುರುತನಕ್ಕಿದು ಪಥವೆ,ನಾರಿಯರಿಬ್ಬರೊಡನೆ ಇಪ್ಪುದು ?
ಶಿವಶಿವಾ ನಿಮ್ಮ ನಡವಳಿ ?
ಶಂಭುಜಕ್ಕೇಶ್ವರಾ, ಅಲ್ಲದಿರ್ದಡೇಕೆ
ಶ್ರುತಿಗಳ ಕೈಯಿಂದತ್ತತ್ತಲೆನಿಸಿಕೊಂಬೆ.
Transliteration Hiriyatanakke pathave,bāṇana maneya bāgila kāyvudu?
Mahantatanakke pathave, nambige kuṇṭaṇiyādudu?
Karuṇitanakke pathave,siriyāḷana magana koluvudu?
Dānitanakke pathave, dāsana vastrava sīḷuvudu?
Nim'ma hiriyatanakkidu pathave,ballāḷana vadhuva bēḍuvudu?
Nim'ma gurutanakkidu pathave,nāriyaribbaroḍane ippudu?
Śivaśivā nim'ma naḍavaḷi?
Śambhujakkēśvarā, alladirdaḍēke
śrutigaḷa kaiyindattattalenisikombe.