•  
  •  
  •  
  •  
Index   ವಚನ - 2    Search  
 
ಗುರುಮುಖದಿಂದ ಬಂದುದೇ ಗುರುಪ್ರಸಾದ ಆ ಪ್ರಸಾದವನು ಲಿಂಗಕ್ಕೆ ಅರ್ಪಿಸಿದಲ್ಲಿ ಲಿಂಗಪ್ರಸಾದ. ಭೋಜ್ಯ ಕಟ್ಟಿ ಲಿಂಗಕ್ಕೆ ಕೊಟ್ಟು ಸಲಿಸುವುದೇ ಜಂಗಮಪ್ರಸಾದ. ತತ್ಪ್ರಸಾದಿಗಳಲ್ಲಿ ಯಾಚಿಸಿ, ಅವರ ಪ್ರಸಾದವ ಕೊಂಬುದೆ ಪ್ರಸಾದಿಯ ಪ್ರಸಾದ. ಅಪೇಕ್ಷೆಯಿಂದ ಸಲಿಸುವುದೇ ಆಪ್ಯಾಯನಪ್ರಸಾದ. ಗುರುಲಿಂಗಜಂಗಮವ ಕಂಡು, ಆ ಸಮಯದಲ್ಲಿ ತೆಗೆದು ಕೊಂಬುವುದೇ ಸಮಯಪ್ರಸಾದ. ಪಂಚೇಂದ್ರಿಯಂಗಳಲ್ಲಿ ಪಂಚವಿಷಯ ಪದಾರ್ಥಂಗಳನು ಪಂಚವಿಧಲಿಂಗಕ್ಕೆ ಸಮರ್ಪಣ ಮಾಡುವುದೇ ಪಂಚೇಂದ್ರಿಯವಿರಹಿತಪ್ರಸಾದ. ಮನವೇ ಲಿಂಗ, ಬುದ್ಭಿಯೇ ಶಿವಜ್ಞಾನ, ಚಿತ್ತವೇ ಶಿವದಾಸೋಹ, ಅಹಂಕಾರದಲ್ಲಿ ಶಿವಚಿಂತನೆಯುಳ್ಳವನಾಗಿ ಸಲಿಸಿದ್ದೇ ಅಂತಃಕರಣವಿರಹಿತಪ್ರಸಾದ. ತ್ರಿವಿಧಾಂಗದಲ್ಲಿ ತ್ರಿವಿಧಲಿಂಗವ ಸಂಬಂಧಿಸಿ, ಆ ಚಿದ್ಘನಲಿಂಗ ತಾನೆಂದರಿದು, ಆ ತ್ರಿವಿಧಲಿಂಗಕ್ಕೆ ಕೊಡುವುದೇ ಸದ್ಭಾವಪ್ರಸಾದ. ಬಹಿರಂಗದ ಪ್ರಪಂಚವ ನಷ್ಟಮಾಡಿ, ಅರಿವುವಿಡಿದು ಸಲಿಸುವುದೇ ಸಮತಾಪ್ರಸಾದ. ಶ್ರೀಗುರುವಿನ ಪ್ರಸನ್ನತ್ವವೆ ಜ್ಞಾನಪ್ರಸಾದ. ಇಂತೀ ಏಕದಶ ಪ್ರಸಾದವನು ಒಳಹೊರಗೆ ಪರಿಪೂರ್ಣಮಾಗಿ ತಿಳಿಯುವುದೆ ಶಿವತಂತ್ರ, ಗುರುಶಾಂತೇಶ್ವರಾ.
Transliteration Gurumukhadinda bandudē guruprasāda ā prasādavanu liṅgakke arpisidalli liṅgaprasāda. Bhōjya kaṭṭi liṅgakke koṭṭu salisuvudē jaṅgamaprasāda. Tatprasādigaḷalli yācisi, avara prasādava kombude prasādiya prasāda. Apēkṣeyinda salisuvudē āpyāyanaprasāda. Guruliṅgajaṅgamava kaṇḍu, ā samayadalli tegedu kombuvudē samayaprasāda. Pan̄cēndriyaṅgaḷalli pan̄caviṣaya padārthaṅgaḷanu pan̄cavidhaliṅgakke samarpaṇa māḍuvudē Pan̄cēndriyavirahitaprasāda. Manavē liṅga, budbhiyē śivajñāna, cittavē śivadāsōha, ahaṅkāradalli śivacintaneyuḷḷavanāgi salisiddē antaḥkaraṇavirahitaprasāda. Trividhāṅgadalli trividhaliṅgava sambandhisi, ā cidghanaliṅga tānendaridu, ā trividhaliṅgakke koḍuvudē sadbhāvaprasāda. Bahiraṅgada prapan̄cava naṣṭamāḍi, arivuviḍidu salisuvudē samatāprasāda. Śrīguruvina prasannatvave jñānaprasāda. Intī ēkadaśa prasādavanu oḷahorage paripūrṇamāgi tiḷiyuvude śivatantra, guruśāntēśvarā.