•  
  •  
  •  
  •  
Index   ವಚನ - 31    Search  
 
ಅರಿವೇ ತಾನಾಗಿ ತೊಳಗಿ ಬೆಳಗುತ್ತಿಪ್ಪ ಲಿಂಗ್ಏಕ್ಯನು ಎಂತಿರ್ಪನಂದಡೆ; ಬಾವನ್ನದೊಳಗಿಪ್ಪ ಸುಗಂಧದಂತೆ, ಮಾಣಿಕ್ಯದೊಳಗಿಪ್ಪ ಸುರಂಗಿನಂತೆ, ಚಿನ್ನದೊಳಗಿಪ್ಪ ಬನ್ಣದಂತೆ ಭೇದವಿಲ್ಲದಚಲನಯ್ಯಾ, ಸಂಪಿಗೆ ಕಂಪುಂಡ ಭ್ರಮರದಂತೆ ಸೌರಾಷ್ರ ಸೋಮೇಶ್ವರಲಿಂಗದ ಪರಮಸುಖದೊಳಗೆ ಪರವಶನಾದ ಲಿಂಗೈಕ್ಯನು.
Transliteration Arivē tānāgi toḷagi beḷaguttippa liṅgēkyanu entirpanandaḍe; bāvannadoḷagippa sugandhadante, māṇikyadoḷagippa suraṅginante, cinnadoḷagippa banṇadante bhēdavilladacalanayyā, sampige kampuṇḍa bhramaradante saurāṣra sōmēśvaraliṅgada paramasukhadoḷage paravaśanāda liṅgaikyanu.