ಅರ್ಘ್ಯಂ ಪಾದ್ಯಂ ತಥಾಚಮ್ಯಂ ಸ್ನಾನಂ ಪಂಚಾಮೃತಾದಿಭಿಃ
ದರ್ಪಣಂ ಧೂಪದೀಪಂ ಚ ಚಾಮರಂ ಆತಪತ್ರಕಂ
ಗೀತಂ ವಾದ್ಯಂ ತಥಾ ನೃತ್ಯಂ ನಮಸ್ಕಾರಂ ಜಪಂ ತಥಾ
ಪ್ರದಕ್ಷಿಣಂ ಕ್ರಮೇಣೋಕ್ತಂ ಷೋಡಶಸ್ಯೋಪಚಾರಕಂ
ಗಂಧಾಕ್ಷತಂ ಚ ಪುಷ್ಪಂ ಚ ವಸ್ತ್ರಾಭರಣಾನುಲೇಪನಂ
ನೈವೇದ್ಯಂ ಚ ತಾಂಬೂಲಂ ಅರ್ಚನಂ ಚಾಷ್ಟಮಂ ಭವೇತ್
-ಇಂತು ಅಷ್ಟವಿಧಾರ್ಚನೆ ಷೋಡಶೋಪಚಾರವು.
ಗುರುವಿಂಗೆ ತನು, ಲಿಂಗಕ್ಕೆ ಮನ, ಜಂಗಮಕ್ಕೆ ಧನ
ಮುಂತಾಗಿ ಮಾಡುವುದು.
ಭಕ್ತಿ ಜ್ಞಾನ ವೈರಾಗ್ಯವಿದೆಂದರಿಯಲು ಮೋಕ್ಷ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Transliteration Arghyaṁ pādyaṁ tathācamyaṁ snānaṁ pan̄cāmr̥tādibhiḥ
darpaṇaṁ dhūpadīpaṁ ca cāmaraṁ ātapatrakaṁ
gītaṁ vādyaṁ tathā nr̥tyaṁ namaskāraṁ japaṁ tathā
pradakṣiṇaṁ kramēṇōktaṁ ṣōḍaśasyōpacārakaṁ
gandhākṣataṁ ca puṣpaṁ ca vastrābharaṇānulēpanaṁ
naivēdyaṁ ca tāmbūlaṁ arcanaṁ cāṣṭamaṁ bhavēt
-intu aṣṭavidhārcane ṣōḍaśōpacāravu.
Guruviṅge tanu, liṅgakke mana, jaṅgamakke dhana
muntāgi māḍuvudu.
Bhakti jñāna vairāgyavidendariyalu mōkṣa
uriliṅgapeddipriya viśvēśvarā.