•  
  •  
  •  
  •  
Index   ವಚನ - 42    Search  
 
ಆದಿಮಧ್ಯ ಅವಸಾನದಲ್ಲಿಯೂ ಎನ್ನನು ಆಶೆಯೇ ಗ್ರಹಿಸುತ್ತಿದೆ. ಶಿವ ಶಿವಾ, ಆಸೆಯಿಂದ ಘಾಸಿಯಾಗುತ್ತಿದ್ದೇನೆ. ಶಿವ ಶಿವಾ, ಆ ಹೊನ್ನು ಹೆಣ್ಣು ಮಣ್ಣಿನ ಆಶೆ ಘಾಸಿಮಾಡಿ ಕಾಡುತ್ತಿದೆ. ಶಿವ ಶಿವಾ, ಈ ಆಶೆಯ ಕೆಡಿಸಿ ನಿಮ್ಮ ಶ್ರೀಪಾದದಾಸೆಯೆ ನಿವಾಸವಾಗಿರಿಸಯ್ಯಾ ಎನ್ನನು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Transliteration Ādimadhya avasānadalliyū ennanu āśeyē grahisuttide. Śiva śivā, āseyinda ghāsiyāguttiddēne. Śiva śivā, ā honnu heṇṇu maṇṇina āśe ghāsimāḍi kāḍuttide. Śiva śivā, ī āśeya keḍisi nim'ma śrīpādadāseye nivāsavāgirisayyā ennanu, uriliṅgapeddipriya viśvēśvarā.