•  
  •  
  •  
  •  
Index   ವಚನ - 62    Search  
 
ಎನಗಾದ ಮಹಾಪದವನರಿಯದೆ ನಾನು ಬಳಲಿದೆನಯ್ಯಾ, ಎನ್ನ ಪದವ ಈಗ ಅರಿದೆನು, ಬಳಲಿಕೆ ಹೋಯಿತ್ತು ಪರಿಣಾಮವಾಯಿತ್ತು. ಶಿವ ಶಿವಾ, ಶಿವನೆ ಕರ್ತನು, ನಾನು ಭೃತ್ಯನು ಮಿಕ್ಕುವೆಲ್ಲಾ ಮಿಥ್ಯವೆಂದರಿದು ಈ ಮಹಾಜ್ಞಾನಪದಕ್ಕೆ ಈ ಘನತರಸುಖಕ್ಕೆ ಈ ಮಹಾಪರಿಣಾಮಕ್ಕೆ ಇನ್ನಾವುದೂ ಸರಿಯಲ್ಲ. ಉಪಮಾತೀತ ವಾಙ್ಮನೋತೀತ ನೀನೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Transliteration Enagāda mahāpadavanariyade nānu baḷalidenayyā, enna padava īga aridenu, baḷalike hōyittu pariṇāmavāyittu. Śiva śivā, śivane kartanu, nānu bhr̥tyanu mikkuvellā mithyavendaridu ī mahājñānapadakke ī ghanatarasukhakke ī mahāpariṇāmakke innāvudū sariyalla. Upamātīta vāṅmanōtīta nīne uriliṅgapeddipriya viśvēśvarā.