•  
  •  
  •  
  •  
Index   ವಚನ - 76    Search  
 
ಏಕತತ್ತ್ವ ತ್ರಿತತ್ತ್ವ ಪಂಚತತ್ತ್ವ ಪಂಚವಿಂಶತಿತತ್ತ್ವ ಷಟ್‍ತ್ರಿಂಶತ್ ತತ್ತ್ವ ಇಂತೀ ತತ್ತ್ವಂಗಳೆಲ್ಲವನೂ ಗರ್ಭೀಕರಿಸಿಕೊಂಡಿಪ್ಪ ಈ ತತ್ತ್ವಂಗಳೆಲ್ಲವಕ್ಕೆಯೂ ಅಧಿಕವಾಗಿಪ್ಪ ಮಹಾತತ್ತ್ವವೂ `ನ ಗುರೋರಧಿಕಂ ನ ಗುರೋರಧಿಕಂ' ಎಂದುದಾಗಿ `ನಾಸ್ತಿ ತತ್ತ್ವಂ ಗುರೋಃ ಪರಂ' ಎಂದುದಾಗಿ 'ಅದ್ವೈತಂ ತ್ರಿಷು ಲೋಕೇಷು ನಾದ್ವೈತಂ ಗುರುಣಾ ಸಹ' ಎಂದುದಾಗಿ `ಗುರುದೇವೋ ಮಹಾದೇವೋ' ಎಂದುದಾಗಿ ಶ್ರೀಗುರುತತ್ತ್ವವೇ ಪರತತ್ತ್ವವು. ಶಿವ ಶಿವಾ ಸಕಲವೇದ ಶಾಸ್ತ್ರಪುರಾಣ ಆಗಮ ಅಷ್ಟಾದಶವಿದ್ಯಂಗಳು ಸರ್ವವಿದ್ಯಂಗಳು ಸಪ್ತಕೋಟಿಮಹಾಮಂತ್ರಂಗಳು ಉಪಮಂತ್ರಂಗಳು ಅನಂತಕೋಟಿಗಳನೂ ಗರ್ಭೀಕರಿಸಿಕೊಂಡಿಪ್ಪ ಇವಕೆ ಮಾತೃಸ್ಥಾನವಾಗಿ, ಇವಕೆ ಉತ್ಪತ್ತಿ ಸ್ಥಿತಿ ಲಯ ಕಾರಣಂಗಳಿಗೆ ಕಾರಣವಾಗಿಪ್ಪ ಮಹಾತತ್ತ್ವ ಮಹಾಮಂತ್ರರಾಜನು, ಶ್ರೀಮೂಲಮಂತ್ರವು. ಈ ಮಹಾತತ್ವ್ತವು ಏಕವಾದ ಮಹಾಲಿಂಗವು. ಈ ಮಹಾಲಿಂಗವೆ ಅಂಗವಾಗಿಪ್ಪ ಮಹತ್ತಪ್ಪ ಮಹಾಸದ್ಭಕ್ತನು. ಆತನೇ ತತ್ತ್ವಜ್ಞನು, ಆತನೇ ತತ್ತ್ವಮಯನು, ಆತನೇ ತತ್ತ್ವಮೂರ್ತಿ. ಈ ಮಹಾಮಂತ್ರ ಮುಖೋದ್ಗತವಾದ ಮಹಾಭಕ್ತನು. ಆತನೇ ವೇದವಿತ್ತು, ಆತನೇ ಶಾಸ್ತ್ರಜ್ಞನು, ಆತನೇ ಪುರಾಣಿಕನು, ಆತನೇ ಆಗಮಜ್ಞನು, ಆತನೇ ಸರ್ವಜ್ಞನು. ಈ ಮಹಾಘನ ಮಹತ್ತನೊಳಕೊಂಡ ಸದ್ಭಕ್ತಂಗೆ ಇತರ ತತ್ತ್ವಂಗಳನೂ ಇತರ ದೇವತೆಗಳನೂ ಇತರ ದೇವದಾನವಮಾನವರುಗಳನೂ ಇತರ ಮಂತ್ರಂಗಳನೂ ಇತರ ಪದಂಗಳನೂ ಸರಿ ಎನಬಹುದೆ? ಶಿವ ಶಿವಾ ಸರಿ ಎಂದಡೆ ಮಹಾದೋಷವು. ಈ ಮಹಾಭಕ್ತನೇ ಉಪಮಾತೀತನು ವಾಙ್ಮನೋತೀತನು. ಈ ಮಹಾದೇವನ ಭಕ್ತನೇ ಮಹಾದೇವನು. ಈ ಮಹಾಭಕ್ತನ ಪೂಜೆಯೇ ಶಿವಲಿಂಗಪೂಜೆ. ಈ ಮಹಾಭಕ್ತನ ಪದವೇ ಪರಮಪದವಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Transliteration Ēkatattva tritattva pan̄catattva pan̄cavinśatitattva ṣaṭtrinśat tattva intī tattvaṅgaḷellavanū garbhīkarisikoṇḍippa ī tattvaṅgaḷellavakkeyū adhikavāgippa mahātattvavū `na gurōradhikaṁ na gurōradhikaṁ' endudāgi `nāsti tattvaṁ gurōḥ paraṁ' endudāgi 'advaitaṁ triṣu lōkēṣu nādvaitaṁ guruṇā saha' endudāgi `gurudēvō mahādēvō' endudāgi śrīgurutattvavē paratattvavu. Śiva śivā sakalavēda śāstrapurāṇa āgama aṣṭādaśavidyaṅgaḷu sarvavidyaṅgaḷu saptakōṭimahāmantraṅgaḷu upamantraṅgaḷu anantakōṭigaḷanū garbhīkarisikoṇḍippa ivake mātr̥sthānavāgi, ivake utpatti sthiti laya kāraṇaṅgaḷige kāraṇavāgippa mahātattva mahāmantrarājanu, śrīmūlamantravu. Ī mahātatvtavu ēkavāda mahāliṅgavu. Ī mahāliṅgave aṅgavāgippa mahattappa mahāsadbhaktanu. Ātanē tattvajñanu, ātanē tattvamayanu, ātanē tattvamūrti. Ī mahāmantra mukhōdgatavāda mahābhaktanu. Ātanē vēdavittu, ātanē śāstrajñanu, ātanē purāṇikanu, ātanē āgamajñanu, ātanē sarvajñanu. Ī mahāghana mahattanoḷakoṇḍa sadbhaktaṅge itara tattvaṅgaḷanū itara dēvategaḷanū itara dēvadānavamānavarugaḷanū itara mantraṅgaḷanū itara padaṅgaḷanū sari enabahude? Śiva śivā sari endaḍe mahādōṣavu. Ī mahābhaktanē upamātītanu vāṅmanōtītanu. Ī mahādēvana bhaktanē mahādēvanu. Ī mahābhaktana pūjeyē śivaliṅgapūje. Ī mahābhaktana padavē paramapadavayyā uriliṅgapeddipriya viśvēśvarā.