ಓಂಕಾರವೆಂಬ ವೃಕ್ಷದಲ್ಲಿ ಋಗ್ವೇದ ಯಜುರ್ವೇದ
ಸಾಮವೇದ ಅಥರ್ವಣವೇದಗಳೆಂಬ ನಾಲ್ಕು ಶಾಖೆಗಳು,
ಅನಂತವೈ ಉಪವೇದಂಗಳೆಂಬ ಉಪಶಾಖೆಗಳು,
ಶಾಸ್ತ್ರಂಗಳೆಂಬ ಅಂಕುರ ಪಲ್ಲವ,
ಪುರಾಣಂಗಳೆಂಬ ಪುಷ್ಪ,
ಆಗಮಂಗಳೆಂಬ ಕಾಯಿ ಬಲಿದು,
ಶ್ರೀ ಪಂಚಾಕ್ಷರಿ ಎಂಬ ಮಧುರಪಣ್ಣುಗಳು.
ಅಗಣಿತಫಲವನೂ ಅನಂತಕಾಲ ಭೋಗಿಸಲು
ಮತ್ತಂ ಜಿಹ್ವೆಯೊಳಗೆ ಬಂದಿರಲು ಭೋಗಿಸಿ ಸುಖಿಯಹುದಲ್ಲದೆ
ಇದಿರ ವಿದ್ಯೆಗಳೆಂಬ ಸಸಿಯ ಸಾಕಿ ಸಲಹಲುಂಟೆ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Transliteration Ōṅkāravemba vr̥kṣadalli r̥gvēda yajurvēda
sāmavēda atharvaṇavēdagaḷemba nālku śākhegaḷu,
anantavai upavēdaṅgaḷemba upaśākhegaḷu,
śāstraṅgaḷemba aṅkura pallava,
purāṇaṅgaḷemba puṣpa,
āgamaṅgaḷemba kāyi balidu,
śrī pan̄cākṣari emba madhurapaṇṇugaḷu.
Agaṇitaphalavanū anantakāla bhōgisalu
mattaṁ jihveyoḷage bandiralu bhōgisi sukhiyahudallade
idira vidyegaḷemba sasiya sāki salahaluṇṭe
uriliṅgapeddipriya viśvēśvarā.