•  
  •  
  •  
  •  
Index   ವಚನ - 94    Search  
 
ಕಾಮಧೇನು ಕಾಮಿಸಿದುದ ಕುಡದಿರ್ದಡೆ ಆ ಕಾಮಧೇನು ಬಂಜೆ ಆಕಳಿಂದ ಕಷ್ಟ ನೋಡಾ. ಕಲ್ಪತರು ಕಲ್ಪಿಸಿದುದ ಕುಡದಿರ್ದಡೆ ಆ ಕಲ್ಪತರು ತರಿತಾರಿ ಬೊಬ್ಬುಲಿಯಿಂದವೂ ಕಷ್ಟ ನೋಡಾ. ಚಿಂತಾಮಣಿ ಚಿಂತಿಸಿದುದ ಕುಡದಿರ್ದಡೆ ಆ ಚಿಂತಾಮಣಿ ಗಾಜುಮಣಿಯಿಂದವೂ ಕರಕಷ್ಟ ನೋಡಾ. ಶ್ರೀಗುರುಕಾರುಣ್ಯವ ಪಡೆದು ಸದ್ಭಕ್ತನಾಗಿ ಶ್ರೀಗುರುಲಿಂಗಜಂಗಮಕ್ಕೆ ಪ್ರೀತಿಯಿಂದ ದಾಸೋಹವ ಮಾಡದಿರ್ದಡೆ ಆ ಭಕ್ತನು ಲೋಕದ ಭವಿಗಳಿಂದವೂ ಕರಕಷ್ಟ ನೋಡಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Transliteration Kāmadhēnu kāmisiduda kuḍadirdaḍe ā kāmadhēnu ban̄je ākaḷinda kaṣṭa nōḍā. Kalpataru kalpisiduda kuḍadirdaḍe ā kalpataru taritāri bobbuliyindavū kaṣṭa nōḍā. Cintāmaṇi cintisiduda kuḍadirdaḍe ā cintāmaṇi gājumaṇiyindavū karakaṣṭa nōḍā. Śrīgurukāruṇyava paḍedu sadbhaktanāgi śrīguruliṅgajaṅgamakke prītiyinda dāsōhava māḍadirdaḍe ā bhaktanu lōkada bhavigaḷindavū karakaṣṭa nōḍayyā uriliṅgapeddipriya viśvēśvarā.