ಕಾಮಿಸುವ ವಸ್ತು ಕರಸ್ಥಲಕ್ಕೆ ಬಂದ ಬಳಿಕ
ಕಾಮಿಸಲೇನುಂಟು? ಇನ್ನೇನ ಕಾಮಿಸುವುದಯ್ಯಾ?
ನಮೋ ಹಿರಣ್ಯಬಾಹವೇ ಸೇನಾನ್ಯೇ ದಿಶಾಂ ಚ ಪತಯೇ ನಮೋ
ನಮೋ ವೃಕ್ಷೇಭ್ಯೋ ಹರಿಕೇಶೇಭ್ಯಃ ಪಶೂನಾಂ ಪತಯೇ ನಮೋ
ಎಂಬ ವಸ್ತು
``ಓಂ ಯೋ ವೈ ರುದ್ರಸ್ವಭಾವಾನ್ ಅನ್ಯಚ್ಚ ಮೃತಂ ಎಂಬ ವಸ್ತು,
ಸುಖಸ್ವರೂಪನು ಅಭಯಹಸ್ತನು ಶಾಂತನು ಕರುಣಿ
ಉರಿಲಿಂಗಪೆದ್ದಿಪ್ರಿಯವಿಶ್ವೇಶ್ವರಾ.
TransliterationKāmisuva vastu karasthalakke banda baḷika
kāmisalēnuṇṭu? Innēna kāmisuvudayyā?
Namō hiraṇyabāhavē sēnān'yē diśāṁ ca patayē namō
namō vr̥kṣēbhyō harikēśēbhyaḥ paśūnāṁ patayē namō
emba vastu
``ōṁ yō vai rudrasvabhāvān an'yacca mr̥taṁ emba vastu,
sukhasvarūpanu abhayahastanu śāntanu karuṇi
uriliṅgapeddipriyaviśvēśvarā