•  
  •  
  •  
  •  
Index   ವಚನ - 113    Search  
 
ಘನಕ್ಕೆ ಘನ ಮಹಿಮೆಯ ಪಡೆವರೆಲ್ಲರು ರುದ್ರಾಕ್ಷಿಯ ಧರಿಸಿಪ್ಪರು, ಆ ಮನುಜರು ಮರ್ತ್ಯರಲ್ಲ ನೋಡಿರೆ. ಮುನ್ನೊಬ್ಬ ವ್ಯಾಧನು ಶ್ವಾನನ ಕೊರಳಲ್ಲಿ ರುದ್ರಾಕ್ಷಿಯ ಕಟ್ಟಲು ಆ ಶ್ವಾನವೂ ರುದ್ರಲೋಕಕ್ಕೆ ಐದಿತೆಂಬುದು ಪುರಾಣಿಸಿದ್ಧ ನೋಡಿರೆ. ಅದು ಕಾರಣ, ಶಿಖೆಯಲ್ಲಿ ಒಂದು, ಶಿರದಲ್ಲಿ ಮೂವತ್ತಾರು ಗಳದಲ್ಲಿ ಮೂವತ್ತೆರಡು, ಕರ್ಣದ್ವಯದಲ್ಲೆರಡು ಹಾರದಲ್ಲಿ ನೂರೆಂಟು, ತೋಳಿನಲ್ಲಿ ಹದಿನಾರು ಕರದಲ್ಲಿ ಹನ್ನೆರಡು, ಜಪದಲ್ಲಿ ಇಪ್ಪತ್ತೆಂಟು ಈ ಕ್ರಮವರಿದು ರುದ್ರಾಕ್ಷಿಯ ಧರಿಸಿದಾತನೇ ರುದ್ರನು, ಆತನೇ ಸದ್ಯೋನ್ಮುಕ್ತನು, ಆತನೇ ಇಹಲೋಕ ಪರಲೋಕ ಪೂಜ್ಯನು, ಅಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Transliteration Ghanakke ghana mahimeya paḍevarellaru rudrākṣiya dharisipparu, ā manujaru martyaralla nōḍire. Munnobba vyādhanu śvānana koraḷalli rudrākṣiya kaṭṭalu ā śvānavū rudralōkakke aiditembudu purāṇisid'dha nōḍire. Adu kāraṇa,Śikheyalli ondu, śiradalli mūvattāru gaḷadalli mūvatteraḍu, karṇadvayadalleraḍu hāradalli nūreṇṭu, tōḷinalli hadināru karadalli hanneraḍu, japadalli ippatteṇṭu ī kramavaridu rudrākṣiya dharisidātanē rudranu, ātanē sadyōnmuktanu, ātanē ihalōka paralōka pūjyanu, ayyā uriliṅgapeddipriya viśvēśvarā.