•  
  •  
  •  
  •  
Index   ವಚನ - 131    Search  
 
ತಂದೆ-ತಾಯಿ ಸಂಯೋಗಸಂಭೂತನಲ್ಲದವನು, ಶ್ವೇತ, ಪೀತ, ಕಪೋತ, ಹರೀತ, ಕೃಷ್ಣ ಮಾಂಜಿಷ್ಟವೆಂಬ ಷಡುವರ್ಣರಹಿತನು, ಆದಿಮಧ್ಯಾವಸಾನಂಗಳಿಲ್ಲದ ಸ್ವತಂತ್ರಮಹಿಮನು, ವೇದವಿಂತುಂಟೆಂದು ರೂಹಿಸಬಾರದವನು, ನಾ ಬಲ್ಲೆನೆಂಬ ಹಿರಿಯರ ಒಗ್ಗೆಗೂ ಮಿಕ್ಕಿಪ್ಪ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Transliteration Tande-tāyi sanyōgasambhūtanalladavanu, śvēta, pīta, kapōta, harīta, kr̥ṣṇa mān̄jiṣṭavemba ṣaḍuvarṇarahitanu, ādimadhyāvasānaṅgaḷillada svatantramahimanu, vēdavintuṇṭendu rūhisabāradavanu, nā ballenemba hiriyara oggegū mikkippa uriliṅgapeddipriya viśvēśvarā.