•  
  •  
  •  
  •  
Index   ವಚನ - 138    Search  
 
ತೃಣಾದಿ ವಿಷ್ಣ್ವಂತ್ಯವಾಗಿ ಸರ್ವರ ಉತ್ಪತ್ತಿಸ್ಥಿತಿಲಯಂಗಳೂ ಶಿವಾಧೀನ. ಇದನರಿದು ಸುಖಿಯಾಗಿ, ಲಿಂಗವಂತನು ಲಿಂಗಾರ್ಚನೆಯ ಮಾಡಿ, ಪರಿಣಾಮಿಯಾದಡೆ ಇಹಪರಸಿದ್ಧಿ, ಸದ್ಯೋನ್ಮುಕ್ತನು. ಈ ವಿಚಾರಜ್ಞಾನವರಿಯದೆ ಮನಭ್ರಮಿಸಿ ಬಳಲಿದಡೆ ಕಾರ್ಯವಿಲ್ಲ. ಲಿಂಗವು ಮೆಚ್ಚನು, ಲಿಂಗವಂತರೆಂತೂ ಮೆಚ್ಚರು. ಇದನರಿದು, ಲಿಂಗವ ನಂಬಿ ಬದುಕಿರಯ್ಯಾ ಕೆಡಬೇಡ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Transliteration Tr̥ṇādi viṣṇvantyavāgi sarvara utpattisthitilayaṅgaḷū śivādhīna. Idanaridu sukhiyāgi, liṅgavantanu liṅgārcaneya māḍi, pariṇāmiyādaḍe ihaparasid'dhi, sadyōnmuktanu. Ī vicārajñānavariyade manabhramisi baḷalidaḍe kāryavilla. Liṅgavu meccanu, liṅgavantarentū meccaru. Idanaridu, liṅgava nambi badukirayyā keḍabēḍa, uriliṅgapeddipriya viśvēśvarā.