ನಾನಾವಿಧದ ಪೂಜೆಗಳ
ಪೂಜಿಸಿದವರೆಲ್ಲಾ ಭಕ್ತರೆ, ಹೇಳಿರಣ್ಣಾ.
ವಿಷ್ಣು ಮೊದಲಾದ ದೇವಜಾತಿಗಳು
ತಾರಕ ರಾವಣಾದಿ ದೇವ ದಾನವ ಮಾನವರನೇಕರು
ಆ ಮಹಾದೇವನ ಪೂಜಿಸಿ ಫಲದಾಯಕರಾಗಿ
ಪದಂಗಳ ಪಡೆದರು.
ಈ ಫಲದಾಯಕರೆಲ್ಲರೂ ಸದ್ಭಕ್ತರಪ್ಪರೆ? ಅಲ್ಲ,
ಅವರೆಲ್ಲರೂ ಉಪಾಧಿಕರು.
ಪರಧನ ಪರಸ್ತ್ರೀ ಪರದೈವವ ಬಿಟ್ಟು
ಪಂಚೇಂದ್ರಿಯ ಷಡ್ವರ್ಗಂಗಳ ಬಿಟ್ಟು ನಿರುಪಾಧಿಕರಾಗಿ
ನಿರಂತರ ಪೂಜಿಸಿದಡೆ, ಆತನೇ ಸದ್ಭಕ್ತನು,
ಆತನೇ ಮಹಾಮಹಿಮನು, ಆತನೇ ಮಹಾದೇವನಯ್ಯಾ.
ಆ ಭಕ್ತಂಗೆ ಭಕ್ತದೇಹಿಕ ದೇವನು,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Transliteration Nānāvidhada pūjegaḷa
pūjisidavarellā bhaktare, hēḷiraṇṇā.
Viṣṇu modalāda dēvajātigaḷu
tāraka rāvaṇādi dēva dānava mānavaranēkaru
ā mahādēvana pūjisi phaladāyakarāgi
padaṅgaḷa paḍedaru.
Ī phaladāyakarellarū sadbhaktarappare? Alla,Avarellarū upādhikaru.
Paradhana parastrī paradaivava biṭṭu
pan̄cēndriya ṣaḍvargaṅgaḷa biṭṭu nirupādhikarāgi
nirantara pūjisidaḍe, ātanē sadbhaktanu,
ātanē mahāmahimanu, ātanē mahādēvanayyā.
Ā bhaktaṅge bhaktadēhika dēvanu,
uriliṅgapeddipriya viśvēśvarā.