ಪರುಷದ ಗೃಹದೊಳಗಿದ್ದು,
ತಿರಿವನೆ ಮನೆ ಮನೆಯ?
ತೊರೆಯೊಳಗಿದ್ದವನು,
ತೃಷೆಯಾಗಲರಸುವನೆ ಕೆರೆಯುದಕವ?
ಮಂಗಳಲಿಂಗ ಅಂಗದ ಮೇಲೆ ಇದ್ದು,
ಅನ್ಯಲಿಂಗಗಳ ನೆನೆವನೆ ನಿಮ್ಮ ಭಕ್ತನು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ?
Transliteration Paruṣada gr̥hadoḷagiddu,
tirivane mane maneya?
Toreyoḷagiddavanu,
tr̥ṣeyāgalarasuvane kereyudakava?
Maṅgaḷaliṅga aṅgada mēle iddu,
an'yaliṅgagaḷa nenevane nim'ma bhaktanu
uriliṅgapeddipriya viśvēśvarā?