•  
  •  
  •  
  •  
Index   ವಚನ - 174    Search  
 
ಪಾಪ ನನ್ನದೇ? ಪುಣ್ಯ ನಿನ್ನದೆ? ಹೇಳಾ ಅಯ್ಯಾ. ದ್ವಂದ್ವಕರ್ಮ ಎನಗೆ ನಿನಗೆ ಬೇರಾದ ಪರಿ ಎಂತಯ್ಯಾ? ವಿಚಾರವಾದ ಬಳಿಕ ನಾನು ಲಿಂಗಪ್ರಾಣಿ, ನೀನು ಭಕ್ತಕಾಯನು. ಇದು ಕಾರಣ ದ್ವಂದ್ವನಾಸ್ತಿ, ದ್ವಂದ್ವಕರ್ಮ ಮುನ್ನವೇ ನಾಸ್ತಿ. ಇನ್ನು ಭಾವದ ಭೇದವೆಂದಡೆ ನಗೆಗೆಡೆಯಪ್ಪುದು. ಹೆಚ್ಚು-ಕುಂದು ನನ್ನದಲ್ಲ, ನಿನ್ನದಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Transliteration Pāpa nannadē? Puṇya ninnade? Hēḷā ayyā. Dvandvakarma enage ninage bērāda pari entayyā? Vicāravāda baḷika nānu liṅgaprāṇi, nīnu bhaktakāyanu. Idu kāraṇa dvandvanāsti, dvandvakarma munnavē nāsti. Innu bhāvada bhēdavendaḍe nagegeḍeyappudu. Heccu-kundu nannadalla, ninnadayyā uriliṅgapeddipriya viśvēśvarā.