ಬ್ರಹ್ಮಾಬ್ರಹ್ಮರಿಲ್ಲದಂದು, ವಿಷ್ಣುಮಾಯೆ,
ಜಗಮಾಯೆಯಿಲ್ಲದಂದು,
ಸೃಷ್ಟಿಯಸೃಷ್ಟಿ ಇಲ್ಲದಂದು, ಕಾಳಿಂಗ ಕರಿಕಂಠರಿಲ್ಲದಂದು,
ಉಮೆಯ ಕಲ್ಯಾಣವಿಲ್ಲದಂದು,
ದ್ವಾದಶಾದಿತ್ಯರಿಲ್ಲದಂದು,
ನಂದಿಕೇಶ್ವರ ದಂಡನಾಥರಿಲ್ಲದಂದು,
ವಿಷವನಮೃತ ಮಾಡದಂದು,
ಲಿಂಗಸ್ಥಲ, ಜಂಗಮಸ್ಥಲ, ಪ್ರಸಾದಿಸ್ಥಲವಿಲ್ಲದಂದು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
ನಿಮ್ಮ ನಿಲವನಾರು ಬಲ್ಲರು?
Transliteration Brahmābrahmarilladandu, viṣṇumāye,
jagamāyeyilladandu,
sr̥ṣṭiyasr̥ṣṭi illadandu, kāḷiṅga karikaṇṭharilladandu,
umeya kalyāṇavilladandu,
dvādaśādityarilladandu,
nandikēśvara daṇḍanātharilladandu,
viṣavanamr̥ta māḍadandu,
liṅgasthala, jaṅgamasthala, prasādisthalavilladandu
uriliṅgapeddipriya viśvēśvarā.
Nim'ma nilavanāru ballaru?