•  
  •  
  •  
  •  
Index   ವಚನ - 200    Search  
 
`ಭಕ್ತಕಾಯ ಮಮಕಾಯ' ಎಂಬ ವಾಕ್ಯದಲ್ಲಿ ಕಾಯಲಿಂಗವೆಂದಿರಿದಿಪ್ಪ, ಗುರು ಲಿಂಗಪ್ರಾಣವ ಮಾಡಿದನಾಗಿ ಲಿಂಗಪ್ರಾಣವೆಂದರಿದಿಪ್ಪ, ಸರ್ವಕ್ರೀ ಲಿಂಗಕ್ರೀ ಎಂದರಿದಿಪ್ಪನಯ್ಯಾ. ಎರಡೆಂದು ಭಾವಿಸ, ಒಂದೆಂದು ನಡೆಯ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Transliteration `Bhaktakāya mamakāya' emba vākyadalli kāyaliṅgavendiridippa, guru liṅgaprāṇava māḍidanāgi liṅgaprāṇavendaridippa, sarvakrī liṅgakrī endaridippanayyā. Eraḍendu bhāvisa, ondendu naḍeya, uriliṅgapeddipriya viśvēśvarā.