ಯೋಗಾಭ್ಯಾಸ ಯೋಗಾಭ್ಯಾಸವೆಂದೆಂಬಿರಿ,
ಯೋಗವು ಅಭ್ಯಾಸವೆ? ಅಭ್ಯಾಸವು ಯೋಗವೆ ಅಯ್ಯಾ?
ಯೋಗಾಭ್ಯಾಸವೆಂಬನ್ನಕ್ಕ ತಾನಾ ಯೋಗಿಯೆ ಅಯ್ಯಾ?
ಯೋಗವ ನುಡಿವರೆ ಅಯ್ಯಾ?
ಗುರುಮತದಿಂ ಭಾವಿಸಲು ಸರ್ವವೂ ಪರಬ್ರಹ್ಮ,
ಶ್ರೀಗುರುವಿನ ಶ್ರೀಪಾದಧ್ಯಾನವೇ ಯೋಗ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Transliteration Yōgābhyāsa yōgābhyāsavendembiri,
yōgavu abhyāsave? Abhyāsavu yōgave ayyā?
Yōgābhyāsavembannakka tānā yōgiye ayyā?
Yōgava nuḍivare ayyā?
Gurumatadiṁ bhāvisalu sarvavū parabrahma,
śrīguruvina śrīpādadhyānavē yōga
uriliṅgapeddipriya viśvēśvarā.