ರುದ್ರಪಿಂಡದಲ್ಲಿ ಉತ್ಪತ್ತಿ
ರುದ್ರವಾಹನನ ಮುಖದಲ್ಲಿ ಸ್ತುತಿ,
ನಂದಿಮುಖದಿಂದ ಶುಚಿ
ಪಂಚಶಿಖಿ ಉದ್ಧೂಳಿತ ಅಗ್ನಿಕಾರ್ಯನೆವದಿಂದ
ವಿಭೂತಿಯ ಧರಿಸಿದಿರಿ, ಇದ್ದಿದ್ದೇನ ನೆನೆದಿರಿ.
ಎಡೆಯಂತರದಲ್ಲಿ ಮಲಿನವ ಧರಿಸಿ ಹೆಡ್ಡರಾದಿರಿ,
ಅರಿದು ಬರಿದೆ ಬರಿದೊರೆವೋದಿರಿ,
ಶ್ವಾನಜ್ಞಾನಿಗಳಾದಿರಿ, ಕೆಟ್ಟಿರಯ್ಯೋ ದ್ವಿಜರು.
ತದ್ಧಿನಂಗಳ ಮಾಡುವಲ್ಲಿ ಪಿತೃಗಳನ್ನುದ್ಧರಿಸುವಲ್ಲಿ
`ಶ್ರೀ ರುದ್ರಪಾದೇ ದತ್ತಮಸ್ತು' ಎಂಬಿರಿ.
`ಏಕ ಏವ ರುದ್ರಃ' ಎಂದು ಅಧ್ಯಾಯಂಗಳಲ್ಲಿ ಹೇಳುವಿರಿ
ನಿಮಗಿಂದ ನಾವು ಬುದ್ಧಿವಂತರೇ?
ದಧೀಚಿ ಗೌತಮಾದಿಗಳ ಶಾಪವ ಹೊತ್ತಿರಿ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Transliteration Rudrapiṇḍadalli utpatti
rudravāhanana mukhadalli stuti,
nandimukhadinda śuci
pan̄caśikhi ud'dhūḷita agnikāryanevadinda
vibhūtiya dharisidiri, iddiddēna nenediri.
Eḍeyantaradalli malinava dharisi heḍḍarādiri,
aridu baride baridorevōdiri,
śvānajñānigaḷādiri, keṭṭirayyō dvijaru.
Tad'dhinaṅgaḷa māḍuvalli pitr̥gaḷannud'dharisuvalli
`śrī rudrapādē dattamastu' embiri.
`Ēka ēva rudraḥ' endu adhyāyaṅgaḷalli hēḷuviri
nimaginda nāvu bud'dhivantarē?
Dadhīci gautamādigaḷa śāpava hottiri,
uriliṅgapeddipriya viśvēśvarā.