ಲಿಂಗಪ್ರಸಾದವಂ ಚೆಲ್ಲಿ,
ಜಂಗಮಪ್ರಸಾದದ ಸುಯಿಧಾನಿಯೆಂಬ
ಅಂಗಹೀನ ಮೂಕೊರೆಯ
ಹೊಲೆಯನ ಮುಖವ ನೋಡಲಾಗದು!
ಅದೇನು ಕಾರಣವೆಂದಡೆ :
ಗುರುವಾವುದು? ಲಿಂಗವಾವುದು? ಜಂಗಮವಾವುದು?
ಇಂತೀ ತ್ರಿವಿಧವು ಒಂದಾದ ಕಾರಣ
'ಏಕಮೂರ್ತಿಸ್ತ್ರಯೋ ಭಾಗಃ ಗುರುಲಿಂಗಂತು ಜಂಗಮಃ
ಜಂಗಮಶ್ಚ ಗುರುರ್ಲಿಂಗಂ ತ್ರಿವಿಧಂ ಲಿಂಗಮುಚ್ಯತೇ'
ಎಂದುದಾಗಿ, ಒಂದಬಿಟ್ಟೊಂದ
ಹಿಡಿದ ಸಂದೇಹಿ ಹೊಲೆಯನ ಕಂಡರೆ
ಹಂದಿ ನಾಯ ಬಸುರಲ್ಲಿ ಹಾಕದೆ ಬಿಡುವನೇ?
ನಮ್ಮ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
Transliteration Liṅgaprasādavaṁ celli,
jaṅgamaprasādada suyidhāniyemba
aṅgahīna mūkoreya
holeyana mukhava nōḍalāgadu!
Adēnu kāraṇavendaḍe:
Guruvāvudu? Liṅgavāvudu? Jaṅgamavāvudu?
Intī trividhavu ondāda kāraṇa
'ēkamūrtistrayō bhāgaḥ guruliṅgantu jaṅgamaḥ
jaṅgamaśca gururliṅgaṁ trividhaṁ liṅgamucyatē'
endudāgi, ondabiṭṭonda
hiḍida sandēhi holeyana kaṇḍare
handi nāya basuralli hākade biḍuvanē?
Nam'ma uriliṅgapeddipriya viśvēśvara.