•  
  •  
  •  
  •  
Index   ವಚನ - 266    Search  
 
ವಟಬೀಜ ವಟವೃಕ್ಷಕೋಟಿಯ ನುಂಗಿಪ್ಪಂತೆ ಸಟೆಯಿಂದಾದ ಅಜಾಂಡ ಬ್ರಹ್ಮಾಂಡ ಕೋಟಿಗಳ ನುಂಗಿಪ್ಪ ಲಿಂಗವೇ, ದಿಟಪುಟವಾಗಿ ಕಣ್ಣುಮನಕರಸ್ಥಲಕ್ಕೆ ಪ್ರಕಾಶವಾದೆ. ಮಝಭಾಪು ಮಝಭಾಪು ಲಿಂಗವೇ `ನ ಚ ರೇಣುರ್ನಚಾಕ್ಷುಷಂʼ ಎಂದೆನಿಸುವ ಲಿಂಗವೇ, ನಿಮ್ಮ ಮುಟ್ಟಿ ಉತ್ಪತ್ತಿಸ್ಥಿತಿಲಯಕ್ಕೆ ಹೊರಗಾದೆನಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Transliteration Vaṭabīja vaṭavr̥kṣakōṭiya nuṅgippante saṭeyindāda ajāṇḍa brahmāṇḍa kōṭigaḷa nuṅgippa liṅgavē, diṭapuṭavāgi kaṇṇumanakarasthalakke prakāśavāde. Majhabhāpu majhabhāpu liṅgavē `na ca rēṇurnacākṣuṣaṁʼ endenisuva liṅgavē, nim'ma muṭṭi utpattisthitilayakke horagādenayyā uriliṅgapeddipriya viśvēśvarā.