•  
  •  
  •  
  •  
Index   ವಚನ - 339    Search  
 
ಸಮ್ಯಜ್ಞಾನ ಸದ್ಭಕ್ತಿ ಸನ್ನಹಿತನಾಗಿ, ಲಿಂಗ ಮುಂತಾಗಿ ಮಾಡಿದ ಕ್ರೀಗಳು ಲಿಂಗಕ್ರೀ. ಪೂಜೆ, ಧ್ಯಾನ, ಅರ್ಪಿತ, ಪ್ರಸಾದ, ಮುಕ್ತಿ ಇವೆಲ್ಲವು ಲಿಂಗದೊಳಗು. ಅಜ್ಞಾನ, [ಅ]ಭಕ್ತಿ, ಮರವೆ, ಅಂಗ ಮುಂತಾಗಿ ಮಾಡಿದ ಕ್ರೀಗಳು ಅಂಗಕ್ರೀ, ಅದು ಹೊರಗು. ಇದು ಕಾರಣ, ಸಮ್ಯಜ್ಞಾನ ಸದ್ಭಕ್ತಿ ಸನ್ನಹಿತವಾದುದೆ ಸದ್ಭಕ್ತಿ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Transliteration Samyajñāna sadbhakti sannahitanāgi, liṅga muntāgi māḍida krīgaḷu liṅgakrī. Pūje, dhyāna, arpita, prasāda, mukti ivellavu liṅgadoḷagu. Ajñāna, [a]bhakti, marave, aṅga muntāgi māḍida krīgaḷu aṅgakrī, adu horagu. Idu kāraṇa, samyajñāna sadbhakti sannahitavādude sadbhakti, uriliṅgapeddipriya viśvēśvarā.