•  
  •  
  •  
  •  
Index   ವಚನ - 348    Search  
 
ಸೊಡರ ಹಿಡಿದು ಕುಣಿಯಲ್ಲಿ ಬೀಳುವವರ ಕಂಡು, ವಿಧಿಯ ಕೈಯಲ್ಲು ನಿಸ್ತರಿಸಲಾರೆನಯ್ಯಾ ನಾನು. ಅಹಂಗಾದೆನಲ್ಲಾ ಎಂಬ ಚಿಂತೆಯ ನಿಸ್ತರಿಸಲಾರೆನಯ್ಯಾ. ವೇದವೆಂಬ ಮಹಾಜ್ಯೋತಿಯ ಹಿಡಿದು ಶಿವಪಥದಲ್ಲಿ ನಡೆಯಲರಿಯದೆ ಪಾಪದ ಕುಣಿಯಲ್ಲಿ ಬೀಳುವವರ ಕಂಡು ನಗೆಯಾದುದಯ್ಯಾ. ಗುರೂಪದೇಶವೆಂಬ ಜ್ಯೋತಿಯ ಹಿಡಿದು, ಶಿವಪಥದಲ್ಲಿ ನಡೆದು ಪ್ರಸಾದವೆಂಬ ನಿಧಾನವ ಕಂಡುಕೊಂಡು ಉಂಡು ಪರಿಣಾಮಿಸಿ ಬದುಕಿದೆನಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Transliteration Soḍara hiḍidu kuṇiyalli bīḷuvavara kaṇḍu, vidhiya kaiyallu nistarisalārenayyā nānu. Ahaṅgādenallā emba cinteya nistarisalārenayyā. Vēdavemba mahājyōtiya hiḍidu śivapathadalli naḍeyalariyade pāpada kuṇiyalli bīḷuvavara kaṇḍu nageyādudayyā. Gurūpadēśavemba jyōtiya hiḍidu, śivapathadalli naḍedu prasādavemba nidhānava kaṇḍukoṇḍu uṇḍu pariṇāmisi badukidenayyā uriliṅgapeddipriya viśvēśvarā.