ವಮನವ ಮಾಡಿದ ಅಪೇಯವ
ಕ್ಷುಧೆಯಾಯಿತೆಂದು ಮುಟ್ಟುದು ಕುನ್ನಿ.
ಅಮಲವಸ್ತು ತ್ರಿವಿಧವ ಮಲವೆಂದು ಕಳೆದು,
ಮತ್ತಾಗೆ ತಲೆದೋರಿ,
ಲಿಂಗ ಮುಂತಾಗಿ ಕೊಟ್ಟುಕೊಳಬಹುದೆಂದು
ಸಂದೇಹವನಿಕ್ಕಬಹುದೆ?
ಬಿಟ್ಟೆನೆಂಬ ಭ್ರಾಮಕವಿಲ್ಲದೆ, ಹಿಡಿದಲ್ಲಿ ಕಲೆದೋರದೆ,
ಸುಖದುಃಖವೆಂಬುದನರಿಯದೆ,
ನೆರೆ ಅರಿದು ಹರಿದು, ಆ ಹರಿದರಿವೆ ಕರಿಗೊಂಡು ನಿಂದಲ್ಲಿ
ಆತ ಉಂಡು ಉಪವಾಸಿಯಪ್ಪ, ಬಳಸಿ ಬ್ರಹ್ಮಚಾರಿಯಪ್ಪ,
ಸದ್ಯೋಜಾತಲಿಂಗದಲ್ಲಿ ಉಭಯವಳಿದ ಶರಣ.
Transliteration Vamanava māḍida apēyava
kṣudheyāyitendu muṭṭudu kunni.
Amalavastu trividhava malavendu kaḷedu,
mattāge taledōri,
liṅga muntāgi koṭṭukoḷabahudendu
sandēhavanikkabahude?
Biṭṭenemba bhrāmakavillade, hiḍidalli kaledōrade,
sukhaduḥkhavembudanariyade,
nere aridu haridu, ā haridarive karigoṇḍu nindalli
āta uṇḍu upavāsiyappa, baḷasi brahmacāriyappa,
sadyōjātaliṅgadalli ubhayavaḷida śaraṇa.