ನವನೀತವ ಅರೆದು ಸಣ್ಣಿಸಬೇಕೆಂದಡೆ,
ಅದು ಉಭಯ ಪಾಷಾಣದ ಮಧ್ಯದಲ್ಲಿ
ಜ್ವಾಲೆಯ ಡಾವರಕ್ಕೆ ಕರಗುವದಲ್ಲದೆ ಅರೆಪುನಿಂದುಂಟೆ?
ನೆರೆ ಅರಿದು ಹರಿದವನಲಿ ಪರಿಭ್ರಮಣವ ವಿಚಾರಿಸಲಿಕ್ಕೆ
ಆ ವಿಚಾರದಲ್ಲಿಯೆ ಲೋಪವಾಯಿತ್ತು, ಸದ್ಯೋಜಾತಲಿಂಗದಲ್ಲಿ
Transliteration Navanītava aredu saṇṇisabēkendaḍe,
adu ubhaya pāṣāṇada madhyadalli
jvāleya ḍāvarakke karaguvadallade arepuninduṇṭe?
Nere aridu haridavanali paribhramaṇava vicārisalikke
ā vicāradalliye lōpavāyittu, sadyōjātaliṅgadalli