ಶರೀರಕ್ಕೆ ರುಜೆ ಬಂದು ತೊಡಕಿದಲ್ಲಿ
ರುಜೆಯ ಭೇದವನರಿತು,
ಶರೀರಧರ್ಮವನರಿತು
ತನುವಿಗೆ ಚಿಕಿತ್ಸೆ, ಆತ್ಮಂಗೆ ಸುಖರೂಪು
ಉಭಯವನರಿದು ಆರೈವ ಕಾರಣ ಪಂಡಿತನಪ್ಪ.
ಇಂತೀ ಭೇದದಂತೆ ಗುರುಚಾರಿತ್ರನಾಗಿ,
ಶಿವಲಿಂಗಪೂಜಕನಾಗಿ,
ಚರಸೇವೆಸನ್ನದ್ಧನಾಗಿ,
ಇಂತೀ ಸತ್ಕ್ರೀಗಳಲ್ಲಿ ನಿರ್ಧರವಪ್ಪ ಮಹಾಭಕ್ತನಿಪ್ಪುದೆ
ಸದ್ಯೋಜಾತಲಿಂಗದ ಸೆಜ್ಜಾಗೃಹ.
Transliteration Śarīrakke ruje bandu toḍakidalli
rujeya bhēdavanaritu,
śarīradharmavanaritu
tanuvige cikitse, ātmaṅge sukharūpu
ubhayavanaridu āraiva kāraṇa paṇḍitanappa.
Intī bhēdadante gurucāritranāgi,
śivaliṅgapūjakanāgi,
carasēvesannad'dhanāgi,
intī satkrīgaḷalli nirdharavappa mahābhaktanippude
sadyōjātaliṅgada sejjāgr̥ha.