ಎಲ್ಲಾ ಗಣಂಗಳಿಗೆ ಬಿನ್ನಹ:
ನೀವು ಮರ್ತ್ಯಕ್ಕೆ ಬರುವಂದಿಗೆ ದಕ್ಷಿಣದಲ್ಲಿ
ಭಕ್ತಿಗೆ ತವರ್ಮನೆಯಾದೀತು,
ಅನಂತ ಲಿಂಗನಿಷ್ಠೆಗಳಾದಾವು,
ಮಹಾಪವಾಡ ಪುರುಷರು ಹುಟ್ಟಾರು,
ನಿಂದೆಯಂ ಮಾಡ್ಯಾರು,
ಅವರಿಗೆ ತೋರಿ ನಮ್ಮ ಪುರುತರು ಪವಾಡವ ಮೆರೆದಾರು.
ಶಾಂತ ಕಲಿದೇವರು ಸಾಕ್ಷಿಯಾಗಿ ನಮ್ಮ ಪುರಾತರು
ಮರ್ತ್ಯಕ್ಕೆ ಬಂದು ಕಲಿಯ ತೊಳೆದಲ್ಲದೆ ಬಾರರು,
ನಮ್ಮ ಪುರಾತರು ಬರುವಂದಿಗೆ ಮುಚ್ಚಿದ ಕಣ್ಣ ತೆರೆಯಯ್ಯ,
ಕಲಿಯುಗದ ಬೆಳೆಯ ಕೆಡಿಸಯ್ಯ,
ಭಕ್ತಿಯ ಬೆಳೆಯ ಬೆಳೆಸಯ್ಯ,
ನಮ್ಮ ಉರಿಲಿಂಗದೇವರ ಶರಣರ ಮರ್ತ್ಯಕ್ಕೆ ಬರಿಸಯ್ಯ.
Transliteration Ellā gaṇaṅgaḷige binnaha:
Nīvu martyakke baruvandige dakṣiṇadalli
bhaktige tavarmaneyādītu,
ananta liṅganiṣṭhegaḷādāvu,
mahāpavāḍa puruṣaru huṭṭāru,
nindeyaṁ māḍyāru,
avarige tōri nam'ma purutaru pavāḍava meredāru.
Śānta kalidēvaru sākṣiyāgi nam'ma purātaru
martyakke bandu kaliya toḷedallade bāraru,
nam'ma purātaru baruvandige muccida kaṇṇa tereyayya,
kaliyugada beḷeya keḍisayya,
bhaktiya beḷeya beḷesayya,
nam'ma uriliṅgadēvara śaraṇara martyakke barisayya